ಸುದ್ದವಿಜಯ, ಜಗಳೂರು: ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಪ್ರೌಢ ಶಾಲೆಗಳ ಬಡ್ತಿ ಮತ್ತು ವರ್ಗಾವಣೆಯ ವಿಷಯದಲ್ಲಿ ಅನ್ಯಾಯವಾಗುತ್ತಿರುವುದನ್ನು ಸರಪಡಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷಕರ ಸಂಘದಿಂದ ಪ್ರಬಾರ ಬಿಇಒ ಸುರೇಶ್ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಎಂ ಹನುಮಂತೇಶ್ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಾರ್ವತ್ರಿಕ ವರ್ಗಾವಣೆಯೂ ಈಗಾಗಲೇ ಆರಂಭವಾಗಿದೆ. ಸುಮಾರು 25 ವರ್ಷಗಳಿಂದಲೂ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‍ಟಿ ಶಿಕ್ಷಕರಿಗೆ ತುಂಬ ಅನ್ಯಾಯವಾಗಿದೆ.
ಶೇ.90ರಷ್ಟು ಕರ್ತವ್ಯ ನಿರ್ವಹಿಸಿರುವ ಪಿಎಸ್‍ಟಿ ಶಿಕ್ಷಕರಿಗೆ ಕೇವಲ ಶೇ 10ರಷ್ಟು ಖಾಲಿ ಹುದ್ದೆಗಳನ್ನು ತೋರಿಸಲಾಗಿದೆ. ಇನ್ನುಳಿದ ಎಲ್ಲಾ ಹುದ್ದೆಗಳಿಗೆ ಜಿಪಿಟಿ ಶಿಕ್ಷಕರಿಗೆ ಕಾಯ್ದಿರಿಸಲಾಗಿದೆ. ಇದರಿಮದ ಪಿಎಸ್‍ಟಿ ಶಿಕ್ಷಕರಿಗೆ ವರ್ಗವಾಣೆಯಲ್ಲಿ ಸ್ಥಳಗಳು ಸಿಗದಂತಾಗಿದ್ದು ಅನ್ಯಾಯವಾಗುತ್ತಿದೆ. ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸಿ ಅಂಡ್ ಆರ್ ಸಿದ್ದುಪಡಿ ಹಾಗೂ ಪಿಎಸ್‍ಟಿ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ 6ರಿಂದ 8ನೇ ತರಗತಿ ಪಾಠ ಬೋಧನೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನಿಡಿದರು.
ಈ ಸಂದರ್ಭದಲ್ಲಿ ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಎಂ ಹನುಮಂತೇಶ್, ಪ್ರಾ.ಶಾ ಪದವಿಧರರ ಸಂಘದ ಅಧ್ಯಕ್ಷ ಹೆಚ್, ರಾಜ್‍ಕೋಟಿ, ಕಾರ್ಯದರ್ಶಿಗಳಾದ ಆಂಜನೇಯನಾಯ್ಕ, ಎಂ.ಕೆ ಪ್ರಕಾಶ್, ಪದಾಧಿಕಾರಿಗಳಾದ ಕೆ.ಜಿ ಶ್ರೀದೇವಿ, ಎಚ್. ನಾಗರತ್ನಮ್ಮ, ಎಂ. ಪ್ರಕಾಶ್, ಸಹಕಾರ್ಯದರ್ಶಿ ಇ. ಸತೀಶ್, ಜಂಬುನಾಥ್, ಎಲ್ . ಈರಪ್ಪ, ನಾಗರಾಜ್, ಕೆ.ಆರ್ ವೀರೇಶ್ ಸೇರಿದಂತೆ ಮತ್ತಿತರಿದ್ದರು.