ಸುದ್ದಿವಿಜಯ,ವಿಶೇಷ: ಇತ್ತೀಚೆಗೆ ಗೂಗಲ್ ಬಳಕೆ ವ್ಯಾಪಕವಾಗಿದೆ. ಮಕ್ಕಳಿರಲಿ ಮುದುಕರಿರಲಿ ಏನಾದ್ರೂ ಇನ್ಫಾರ್ಮೆಷನ್ ಬೇಕು ಅಂದ್ರೆ ಸಾಕು ಥಟ್ ಅಂತ ಅಂಗೈನಲ್ಲಿರುವ ಸಾಧನ ಮೊಬೈಲ್ ಒತ್ತಿ ಕೇಳ್ತಾರೆ. ಅವರಿಗೆ ಬೇಕಾದ ಮಾಹಿತಿ ಪಡೀತಾರೆ. ಹೀಗಾಗಿ ಗೂಗಲ್ ಬಳಸದೇ ಇರುವವರು ಅಪರೂಪ.
ಹೌದು ಈಗಿನ ಕಾಲದಲ್ಲಿ ಮೊಬೈಲ್ ಬಳಸುವ ಎಲ್ಲಾ ಜನರು ಗೂಗಲ್ ಬಳಸುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇದರ ನಡುವೆ ಗೂಗಲ್ ನೀಡುವ ಕೆಲವು ವರದಿಗಳು ಜನರಿಗೆ ಆಶ್ಚರ್ಯ ಉಂಟಾಗುವಂತೆ ಮಾಡುತ್ತದೆ ಎಂದು ಹೇಳಬಹುದು.
ಕೇಳದ ಭಾರಿ ಗೂಗಲ್ ಭಾರತದ ಯುವತಿಯರು ಒಬ್ಬರೇ ಇದ್ದಾಗ ಗೂಗಲ್ ನಲ್ಲಿ ಹೆಚ್ಚು ಏನನ್ನು ಹುಡುಕುತ್ತಾರೆ ಅನ್ನುವ ವರದಿಯನ್ನ ನೀಡಿತ್ತ. ಇನ್ನು ಈಗ ಅದೇ ರೀತಿಯಲ್ಲಿ ಗೂಗಲ್ ಮದುವೆಯಾದ ಮಹಿಳೆಯರು ಗೂಗಲ್ ನಲ್ಲಿ ಹೆಚ್ಚು ಏನನ್ನು ಹುಡುಕುತ್ತಾರೆ ಅನ್ನುವ ವರದಿಯನ್ನ ನೀಡಿದೆ.
ಮದುವೆಯಾದವರು ಹುಡುಕುವ ವಿಷಯಗಳು:
ಗೂಗಲ್ ನೀಡಿರುವ ವರದಿಯ ಪ್ರಕಾರ ಮದುವೆಯಾದ ಮಹಿಳೆ ಗೂಗಲ್ ನಲ್ಲಿ ಹೆಚ್ಚು ತನ್ನ ಪತಿ ಏನನನ್ನು ಇಷ್ಟಪಡುತ್ತಾಳೆ ಅನ್ನುವುದರ ಬಗ್ಗೆ ಹುಡುಕಾಡುತ್ತಾಳಂತೆ. ಪತಿ ಏನನನ್ನು ಇಷ್ಟಪಡುತ್ತಾನೆ, ಅವರ ಆಯ್ಕೆಗಳು ಮತ್ತು ಅವರು ಏನನನ್ನು ಇಷ್ಟಪಡುವುದಿಲ್ಲ ಅನ್ನುವುದರ ಬಗ್ಗೆ ಹೆಚ್ಚು ಗೂಗಲ್ ನಲ್ಲಿ ಹುಡುಕುತ್ತಾರೆ ಎಂದು ಗೂಗಲ್ ನಲ್ಲಿ ವರದಿಯಲ್ಲಿ ಹೇಳಿದೆ.
ಗಂಡನ ಹೃದಯ ಗೆಲ್ಲುವ ವಿಷಯಗಳ ಹುಡುಕಾಟ:
ಮದುವೆಯಾದ ಮಹಿಳೆ ತನ್ನ ಪತಿಯ ಹೃದಯವನ್ನ ಗೆಲ್ಲುವುದು ಹೇಗೆ ಮತ್ತು ಅವರು ಏನನ್ನು ಮಾಡಿದರೆ ಬಹಳ ಸಂತೋಷವಾಗಿರುತ್ತಾರೆ ಅನ್ನುವ ಬಗ್ಗೆ ಗೂಗಲ್ ನಲ್ಲಿ ಬಹಳಷ್ಟು ಸರ್ಚ್ ಮಾಡುತ್ತಾರಂತೆ. ಇನ್ನು ಅದೇ ರೀತಿಯಲ್ಲಿ ಕೆಲವು ಮಹಿಳೆಯರು ತನ್ನ ಪತಿಯನ್ನ ಹೇಗೆ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುವುದು ಅನ್ನುವುದರ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರಂತೆ ಮತ್ತು ಅದನ್ನ ಗೂಗಲ್ ನಲ್ಲಿ ಹುಡುಕುತ್ತಾರಂತೆ.
ಯಾವ ಮಗು ಮಾಡಿಕೊಂಡರೆ ಸೂಕ್ತ ಎಂದು ಗೂಗಲ್ನಲ್ಲಿ ಸರ್ಚ್:
ಇನ್ನು ಕೆಲವು ಮಹಿಳೆಯರು ತಾವು ಯಾವ ಮಗುವನ್ನ ಮಾಡಿಕೊಂಡರೆ ಸೂಕ್ತ ಮತ್ತು ಕುಟುಂಬವನ್ನ ವಿಸ್ತರಣೆ ಮಾಡುವುದು ಹೇಗೆ ಅನ್ನುವ ಬಗ್ಗೆ ಮಾಹಿತಿಯನ್ನ ಅವರು ಗೂಗಲ್ ಹೆಚ್ಚು ಹುಡುಕುತ್ತಾರಂತೆ. ಇನ್ನು ಇದರ ಜೊತೆಗೆ ಕೆಲವು ಮಹಿಳೆಯರು ಅತ್ತೆ ಮಾನವ ಜೊತೆಗೆ ಹೇಗೆ ಇರಬೇಕು ಅನ್ನುವುದರ ಬಗ್ಗೆ ಹುಡುಕುತ್ತಾರಂತೆ. ಇನ್ನು ಕೆಲವು ಮಹಿಳೆಯರು ಮದುವೆಯ ಗಂಡನ ಜೊತೆ ನಂತರ ಹೊಸ ವ್ಯವಹಾರವನ್ನ ಹೇಗೆ ಆರಂಭ ಮಾಡುವುದು ಅನ್ನುವುದರ ಬಗ್ಗೆ ಕೂಡ ಹುಡುಕಾಡುತ್ತಾರೆ. ಗೂಗಲ್ ನೀಡಿದ ಈ ವರದಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.