ಒಬ್ಬರೇ ಇದ್ದಾಗ ಹುಡುಗಿಯರು ರಾತ್ರಿಯ ಹೊತ್ತು ಗೂಗಲ್‍ನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವ ವಿಷಯಗಳಿವು ಗೊತ್ತಾ?

Suddivijaya
Suddivijaya June 17, 2022
Updated 2022/06/17 at 1:09 PM

ಸುದ್ದಿ ವಿಜಯ, ವಿಶೇಷ: ಈಗಂತೂ ಮೊಬೈಲ್ ಎಂಬ ಜಂಗಮ ಗಂಟೆ  ಮಕ್ಕಳಿಂದ ಮುದುಕರವರೆಗೂ ಆಕರ್ಷಕ ಸಾಧನ. ಭೂಮಿಯಿಂದ ಚಂದ್ರನವರೆ… ಗುಂಡು ಸೂಜಿಯಿಂದ ವಿಮಾನದವರೆಗೂ ಏನು ಮಾಹಿತಿ ಬೇಕಾದರೂ ಕ್ಷಣ ಮಾತ್ರದಲ್ಲೇ ಬೆರಳ ತುದಿಯಲ್ಲಿನ ಮಾಹಿತಿ ಕಣಜವಾಗಿದೆ. ಈಗಂತೂ ಗೂಗಲ್ ಅತ್ಯಂತ ಹೆಚ್ಚು ಬಳಸುವ ಸರ್ಚ್ ಇಂಜಿನ್ ಆಗಿದೆ. ಮನಸ್ಸಿನಲ್ಲಿ ಯಾವುದೇ ಪ್ರಶ್ನೆ ಮೂಡಿದರೂ, ಏನೇ ಸಂದೇಹ ಬಂದರೂ ಮೊದಲು ಆ ಬಗ್ಗೆ ಗೂಗಲ್‍ನಲ್ಲಿ ಸರ್ಚ್ ಮಾಡಿ ಉತ್ತರ ಕಂಡು ಕೊಳ್ಳುವುದು ಬಹುತೇಕರು ಮಾಡುವ ಕೆಲಸ.

ಪ್ರತಿ ಪ್ರಶ್ನೆಗೂ ಗೂಗಲ್ ಬಳಿ ಉತ್ತರವಿದೆ ಎಂಡು ಹೇಳಲಾಗುತ್ತದೆ. ಪ್ರತಿ ವರ್ಷ ಗೂಗಲ್ ತನ್ನ ಹುಡುಕಾಟ ಫಲಿತಾಂಶಗಳ ವರದಿಯನ್ನು ಬಿಡುಗಡೆ ಮಾಡುತ್ತದೆ. ಕಳೆದ ವರ್ಷ ಹೊರಬಿದ್ದಿರುವ ವರದಿಯಲ್ಲಿ ಮಹಿಳೆಯರ ಇಂಟರ್‍ನೆಟ್ ಬಳಕೆಗೆ ಸಂಬಂಧಿಸಿದ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

ದೇಶದ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಆನ್‍ಲೈನ್‍ನಲ್ಲಿರುತ್ತಾರೆ. ದೈನಂದಿನ ಜೀವನಕ್ಕೆ ಸಂಬಂಧಪಟ್ಟಂತೆ ಇಂಟರ್ನೆಟ್ ಬಳಸುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದಲ್ಲದೆ, ಹುಡುಗಿಯರು ಗೂಗಲ್‍ನಲ್ಲಿ ಏನನ್ನು ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಕುತೂಹಲಕಾರಿಯಾಗಿದೆ.

ವರದಿಯ ಪ್ರಕಾರ, ಹುಡುಗಿಯರು ಬಾಲ್ಯದಿಂದಲೂ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಅವರು ತಮ್ಮ ವೃತ್ತಿಜೀವನಕ್ಕೆ ಗರಿಷ್ಠ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಹೀಗಾಗಿ ಹುಡುಗಿಯರು ಇಂಟರ್ನೆಟ್ ನಲ್ಲಿ ಕೂಡಾ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನೇ ಹುಡುಕುತ್ತಿರುತ್ತಾರೆ. ಜೊತೆಗೆ ಆಕರ್ಷಕ ಉಡುಪುಗಳು, ಸೆಕ್ಸ್‍ಗೆ ಸಂಬಂಧಿಸಿದ ಮಾಹಿತಿ, ಯಾವ ವೃತ್ತಿಯನ್ನು ಮಾಡಬೇಕು ಅಥವಾ ಯಾವ ಕೋರ್ಸ್ ಮಾಡಬೇಕು ಎನ್ನುವ ಬಗ್ಗೆ ಸರ್ಚ್ ಮಾಡುತ್ತಿರುತ್ತಾರೆ. ಅಷ್ಟಕ್ಕು ಹುಡುಗರು ಸಹ ಇದಕ್ಕಿಂತ ಭಿನ್ನವೇನಲ್ಲ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!