‘ಹಾಸ್ಟೆಲ್‍ನಲ್ಲಿದ್ದಾಗ ಗೋಣಿಚೀಲ ಹೊದ್ದು ಮಲಗುತ್ತಿದ್ದೆ’ ಎಂದು ಬಾವುಕರಾದ ಶಾಸಕ ದೇವೇಂದ್ರಪ್ಪ

Suddivijaya
Suddivijaya August 11, 2023
Updated 2023/08/11 at 2:03 PM

ಸುದ್ದಿವಿಜಯ, ಜಗಳೂರು: ನಾನು 1980ರ ದಶಕದಲ್ಲಿ ವಿದ್ಯಾರ್ಥಿಯಾಗಿದ್ದಾಗ ಹಾಸ್ಟೆಲ್ ಸೌಲಭ್ಯ ಸಿಕ್ಕಿರಲಿಲ್ಲ ತಿಪ್ಪೇಗುಂಡೇರ ತೊರಿಯಪ್ಪ ಅವರಿಂದ ನನಗೆ ಹಾಸ್ಟೆಲ್ ಸೌಲಭ್ಯ ಲಭಿಸಿತು. ಆದರೆ ನನಗೆ ಹೊದ್ದುಕೊಳ್ಳಲು ಬೆಡ್‍ಶೀಟ್, ಹಾಸಿಗೆ ಇಲ್ಲದೇ ಇದ್ದಿದ್ದರಿಂದ ಗೋಣಿಚೀಲ ಹೊದ್ದು ಮಲಗುತ್ತಿದ್ದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಮ್ಮ ವಿದ್ಯಾರ್ಥಿ ಜೀವನದ ಕಷ್ಟದ ದಿನಗಳನ್ನು ಮೆಲುಕು ಹಾಕಿದರು.

ತಾಲ್ಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಶುಕ್ರವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ನೂತನ ವಿದ್ಯಾರ್ಥಿ ನಿಲಯ ಪ್ರಾರಂಭೋತ್ಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು 1972ರಿಂದ 1980ರವರೆಗೆ ಮುಖ್ಯಮಂತ್ರಿಯಾಗದ್ದಾಗ ಅಧಿಕಾರ, ಸಂಪತ್ತು ನಾಡಿಗೆ ನೀಡಿ ಅವಕಾಶದ ಹೆಬ್ಬಾಗಿಲನ್ನು ತೆರೆದು ಸರ್ವರಿಗೂ ಸಮಪಾಲು, ಸಮಬಾಳು ನೀಡಿದ ಮಹಾನ್ ನಾಯಕ.

ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿ ಸಾಂಸ್ಕøತಿಕ, ಸಾಮಾಜಿಕ, ಶೈಕ್ಷಣೀಕವಾಗಿ ಅಭಿವೃದ್ಧಿ ಮಾಡಿದ ಮಹಾನ್ ಮಾನವತಾವಾದಿ.ಹಿಂದುಳಿದ ವರ್ಗಗಳ ಆಯೋಗ ರಚಿಸಿ ಅನ್ನ, ಅಕ್ಷರ ದಾಸೋಹ ನೀಡಿದರು.

 ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ನೂತನ ಹಾಸ್ಟೆಲ್ ಉದ್ಘಾಟಿಸಿದ ಶಾಸಕ ದೇವೇಂದ್ರಪ್ಪ ಮತ್ತು ಮಾಜಿ ಶಾಸಕ ಎಸ್.ವಿ.ರಾಮಚಂದ್ರ.
 ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ನೂತನ ಹಾಸ್ಟೆಲ್ ಉದ್ಘಾಟಿಸಿದ ಶಾಸಕ ದೇವೇಂದ್ರಪ್ಪ 

ಯಾರು ಆದ್ಯಾತ್ಮೀಕ ದಾಸೋಹ ಪಡೆಯುತ್ತಾರೊ ಅವರು ದೇಶದ ಉತ್ತಮ ಪ್ರಜೆ ಆಗೊದರಲ್ಲಿ ಸಂದೇಹವಿಲ್ಲ ಎಂದರು. ಅಂದು ಹೊದ್ದುಕೊಳ್ಳಲು ಬೆಡ್‍ಶೀಟ್ ಇಲ್ಲದ ವ್ಯಕ್ತಿ ಇಂದು ಶಾಸಕನಾಗಿ ನೂತನ ಹಾಸ್ಟೆಲ್ ಉದ್ಘಾಟಿಸುತ್ತಿರುವುದು ನನಗೆ ಸಂತೋಷ ತಂದಿದೆ.

ವಿದ್ಯಾರ್ಥಿಗಳು ಏನುಬೇಕಾದರೂ ಸಾಧನೆ ಮಾಡುವ ಅವಕಾಶವಿದೆ ಸರಕಾರಿ ಸೌಲಭ್ಯ ಬಳಸಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಶಾಸಕ ಸ್ಥಾನ ಯಾರಪ್ಪನ ಆಸ್ತಿಯಲ್ಲ. ಜನ ಈ ಬಾರಿ ದೇವೇಂದ್ರಪ್ಪ ಅವರಿಗೆ ಆಶೀರ್ವಾದ ಮಾಡಿದ್ದಾರೆ.

ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿ. ಅವರ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.

ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಗುತ್ತಿದುರ್ಗ ಗ್ರಾಮಕ್ಕೆ ಹಾಸ್ಟೆಲ್ ಸೌಲಭ್ಯ ಬಹಳ ದಿನದ ಕನಸಾಯಿತು.

ನಮ್ಮ ತಾಲೂಕಿನಲ್ಲಿ ನದಿ ಮೂಲವಿಲ್ಲ. ಕಾರ್ಖಾನೆಗಳಿಲ್ಲ. ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಶೈಕ್ಷಣೀಕ ಅಭಿವೃದ್ಧಿ ಸಾಧಿಸಿ ಎಂದರು.

ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಗಾಯತ್ರಿ ಮಾತನಾಡಿ, ಹಾಸ್ಪೆಲ್ ಉದ್ಘಾಟನೆಯಾಗಿರಲಿಲ್ಲ, ಗೊಂದಲ ಇತ್ತು ಅದು ಬಗೆಹರಿದಿದೆ. ಹೊಸಕಟ್ಟಡ ನಿರ್ಮಾಣವಾಗಬೇಕಾದರೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬಿಇಓ ಸುರೇಶ್ ರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರಾದ ಮಾನಸಾ ನಿಂಗಪ್ಪ, ಗುತ್ತಿದುರ್ಗ ಗ್ರಾಮದ ಹಿರಿಯ ನಾಗರಿಕ ಸಿದ್ದಪ್ಪ, ಪಿಎಲ್‍ಡಿ ಬ್ಯಾಂಕ್ ನೂತನ ಸಣ್ಣ ಸೂರಜ್ಜ, ಸಮಾಜ ಕಲ್ಯಾಣಿ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಗ್ರಾಪಂ ಉಪಾಧ್ಯಾಕ್ಷ ಅರ್ಜುನ್, ನಿವೃತ್ತ ಉಪನ್ಯಾಸಕ ಶಂಷುದ್ದೀನ್, ಮುಖ್ಯ ಶಿಕ್ಷಕರಾದ ಶಿವಮ್ಮ,

ಬಿಸಿಎಂ ಅಧಿಕಾರಿ ಆಸ್ಮಾಭಾನು, ಶಿವಣ್ಣ, ಪ್ರಕಾಶ್ ರೆಡ್ಡಿ, ಬೆಸ್ಕಾಂ ಎಇಇ ಗಿರೀಶ್ವನಾಯ್ಕ್, ವಾರ್ಡನ್ ದೇವೇಂದ್ರಪ್ಪ, ಎಸ್‍ಡಿಎಂಸಿ ಅದ್ಯಕ್ಷ ಕಲ್ಲೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!