ಸುದ್ದಿವಿಜಯ, (ವಿಶೇಷ): ಪ್ರತಿಯೊಂದು ಪ್ರಾಣಿಗೂ ನೀರು ಅತ್ಯವಶ್ಯಕ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೀರು ಸೇವಿಸದೇ ಇರುವ ಪ್ರಾಣಿಗಳು ಇಲ್ವೇ ಇಲ್ಲ. ದೇಶದಲ್ಲಿ ಬಹುಪಾಲು ಜನರು ವಿಷಯುಕ್ತ ನೀರನ್ನು ಕುಡಿಯುತ್ತಿದ್ದಾರಂತೆ. ಹೌದು, ಇಂತದ್ದೊಂದು ಆಘಾತಕಾರಿ ವಿಷಯವನ್ನು ಕೇಂದ್ರ ಜಲಶಕ್ತಿ ಸಚಿವಾಲಯ, ರಾಜ್ಯಸಭೆಗೆ ತಿಳಿಸಿದೆ. ನದಿಗಳು, ಕೆರೆಗಳು, ಕೊಳವೆ ಭಾವಿಗಳಲ್ಲಿನ ನೀರಿನಲ್ಲಿ ಕಬ್ಬಿಣ, ನೈಟ್ರೇಟ್, ಕ್ರೋಮಿಯಂ, ಯುರೇನಿಯಂ ಮುಂತಾದ ಲೋಹಗಳು ಸುರಕ್ಷಿತ ಪ್ರಮಾಣಕ್ಕಿಂತ ಹೆಚ್ಚಿವೆಯಂತೆ. ಇಂತಹ ನೀರನ್ನು ದೇಶದ ಶೇ.80 ರಷ್ಟು ಜನರು ಕುಡಿಯುತ್ತಿದ್ದಾರಂತೆ ಎಂದು ಸಚಿವಾಲಯದ ವರದಿಯಲ್ಲಿ ತಿಳಿದುಬಂದಿದೆ.
ದತ್ತಾಂಶಗಳು ಬಿಚ್ಚಿಡುವ ನಿಜ ಸತ್ಯ:
25 ರಾಜ್ಯಗಳ 209 ಜಿಲ್ಲೆಗಳ ಪ್ರತಿ ಲೀಟರ್ ಅಂತರ್ಜಲದಲ್ಲಿ 0.01 ಮಿ.ಗ್ರಾಂ ಆರ್ಸೆಜಿಕ್ ಪತ್ತೆಯಾಗಿದೆ.
29 ರಾಜ್ಯಗಳ 491 ಜಿಲ್ಲೆಗಳ ಪ್ರತಿ ಲೀಟರ್ ಅಂತರ್ಜಲದಲ್ಲಿ 1 ಮಿ.ಗ್ರಾಂ ಕಬ್ಬಿಣ ಪತ್ತೆಯಾಗಿದೆ.
11 ರಾಜ್ಯಗಳ 29 ಜಿಲ್ಲೆಗಳಲ್ಲಿ ಪ್ರತಿ ಲೀಟರ್ ಅಂತರ್ಜಲದಲ್ಲಿ 0.003 ಮಿ.ಗ್ರಾಂ ಕ್ಯಾಡ್ಮಿಯಂ ಪತ್ತೆಯಾಗಿದೆ.
16ರಾಜ್ಯಗಳ 62 ಜಿಲ್ಲೆಗಳಲ್ಲಿ ಪ್ರತಿ ಲೀಟರ್ ಅಂತರ್ಜಲದಲ್ಲಿ 0.05 ಮಿ.ಗ್ರಾಂ ಕ್ರೋಮಿಯಂ ಪತ್ತೆಯಾಗಿದೆ.
18 ರಾಜ್ಯಗಳ 152 ಜಿಲ್ಲೆಗಳ ಪ್ರತಿ ಲೀಟರ್ ಅಂತರ್ಜಲದಲ್ಲಿ 0.03 ಮಿ.ಗ್ರಾಂ ನಷ್ಟು ಯೂರೇನಿಯಂ ಪತ್ತೆಯಾಗಿದೆ.
ಆರೋಗ್ಯದ ಮೇಲೆ ದುಷ್ಪರಿಣಾಮವೇನು?
-ಕುಡಿಯುವ ನೀರಿನಲ್ಲಿ ಆರ್ಸೆನಿಕ್ ಹೆಚ್ಚಾದರೆ ಚರ್ಮದ ಕಾಯಿಲೆ, ಕ್ಯಾನ್ಸರ್
-ಕಬ್ಬಿಣದ ಅಂಶ ಹೆಚ್ಚಾದರೆ ನರಗಳ ನಿಶ್ಯಕ್ತಿ, ಮರೆಗುಳಿತನ, ಪಾರ್ಕಿನ್ಸನ್ ಕಾಯಿಲೆ,
-ಹೆಚ್ಚಿನ ಪ್ರಮಾಣದ ಸೀಸದಿಂದ ನರವ್ಯೂಹಕ್ಕೆ ತೊಂದರೆ
-ಹೆಚ್ಚಿನ ಪ್ರಮಾಣದ ಕ್ಯಾಡ್ಮಿಯಂನಿಂದ ಕಿಡ್ನಿ ತೊಂದರೆ
-ಹೆಚ್ಚಿನ ಪ್ರಮಾಣದ ಕ್ರೋಮಿಯಂನಿಂದ ಸಣ್ಣ ಕರುಳಿನ ಹೈಪರ್‍ಪ್ಲಾಸಿಯಾಕ್ಕೆ ಧಕ್ಕೆ ಉಂಟಾಗಿ, ಗಡ್ಡೆಗಳು ಸೃಷ್ಟಿಯಾಗಲು ಕಾರಣ.
-ಯುರೇನಿಯಂ ಹೆಚ್ಚಾದರೆ ಕಿಡ್ನಿ ಕಾಯಿಲೆಗಳು, ಕ್ಯಾನ್ಸರ್ ಬರುತ್ತದೆ.
ರಾಜ್ಯಸಭೆಗೆ ಕೇಂದ್ರ ಸರಕಾರ ತಿಳಿಸಿರುವ ಪ್ರಕಾರ, ಅಮೃತ 2.0 ಯೋಜನೆಯನ್ನು 2021ರ ಅಕ್ರೋಬರ್‍ನಿಂದ ಜಾರಿಗೊಳಿಸಲಾಗಿದ್ದು, 2026ರೊಳಗೆ ಎಲ್ಲಾ ಮನೆಗಳಿಗೆ ಸ್ವಚ್ಛ ಕುಡಿಯುವ ನೀರನ್ನು ಪೂರೈಸುವ ಗುರಿ ಹೊಂದಿದೆ. ನಾಗರಿಕರೆ ತಾವು ಕುಡಿಯುವ ನೀರಿನ ಗುಣಮಟ್ಟವನ್ನು ಒಮ್ಮೆ ಪರೀಕ್ಷಿಸಿಕೊಂಡು ಕುಡಿದರೆ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತರಾಗಬಹುದು. ನೀರು ಕುಡಿಯುವಾಗ ಎಚ್ಚರವಾಗಿರಿ.